ಹಳೆಯ ಗುಡಿಸಲು, ಛತ್ರಗಳ ಸಾಲಿನ ರಥಬೀದಿ, ಜನರ ವೇಷ ಭೂಷಣಗಳು, ರಥಬೀದಿ ಬಳಿಯ ದಟ್ಟವಾದ ಅರಣ್ಯ, ಇವೆಲ್ಲವನ್ನು ಗಮನಿಸಬಹುದು.
ಈಗಿನ ತರಹದ ವಸತಿ ಗೃಹ, ಹೋಟೆಲು , ಅಂಗಡಿ ಮುಂಗಟ್ಟು ಹಾಗೂ ಕಾಂಕ್ರೀಟ್ ರಸ್ತೆಗಳಿಲ್ಲದ ದಿನಗಳಲ್ಲಿ ಪರ ಊರಿಂದ ಬಂದ ಭಕ್ತಾದಿಗಳು ಚಂಪಾಷಷ್ಟಿಯ ವೈಭವವನ್ನು ನೋಡಲು ಬರುತ್ತಿದ್ದ ಕಾಲವನ್ನು ನೆನಪಿಸುವ ದೃಶ್ಯ.
ಯಾವುದೇ ಬದಲಾದರೂ, ಅಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಮಾತ್ರ ಇನ್ನೂ ಅದೇ ರೀತಿಯಾಗಿ ಪಾಲಿಸುತ್ತಿರುವುದು ಖುಷಿಯ ವಿಚಾರ.



