ಉಡುಪಿ: ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ ನಡೆದ 1 ಕೋಟಿ 70 ಲಕ್ಷ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಶಾಖಾ ಮ್ಯಾನೇಜರ್ ನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಕಾವಡಿ ಶಾಖಾ ಮ್ಯಾನೇಜರ್, ಹೆಗ್ಗುಂಜೆ ಗ್ರಾಮದ ಜಾನುವಾರಕಟ್ಟೆ ನಿವಾಸಿ ಸುರೇಶ್ ಭಟ್ (38) ಬಂಧಿತ ಆರೋಪಿ. ಈತ ಹಾಗೂ ಕಿರಿಯ ಗುಮಾಸ್ತ ಹರೀಶ್ ಕುಲಾಲ್ ಸೇರಿಕೊಂಡು ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ 1 ಕೋಟಿ 70 ಲಕ್ಷ ರೂ. ವಂಚಿಸಿದ್ದರು. ಬಳಿಕ ತಲೆಮರೆಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಆರೋಪಿ ಮ್ಯಾನೇಜರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೋರ್ವ ಆರೋಪಿ ಗುಮಾಸ್ತ ಹರೀಶ್ ಕುಲಾಲ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
