Manipal ನಡುರಸ್ತೆಯಲ್ಲಿ ಮಾರಾಮಾರಿ..!! ಪೊಲೀಸರ ಸಮ್ಮುಖದಲ್ಲಿ ರಾಜಿ...??!!

ಮಣಿಪಾಲ : ಸೈಲೆಂಟ್ ಆಗಿದ್ದ ಮಣಿಪಾಲ ಮತ್ತೆ ಸದ್ದು ಮಾಡಿದೆ. ವಿಕೇಂಡ್ ಮಸ್ತಿಗಾಗಿ ಬಂದ ಗುಂಪೊಂದು ನಡು ರಸ್ತೆಯಲ್ಲಿ ದಾಂದಲೆ ನಡೆಸಿದೆ. ಹೌದು ಮಣಿಪಾಲ ಅಂದ್ರೆ ವೈದ್ಯಕೀಯ ಶಿಕ್ಷಣಕ್ಕೆ ಹೆಸರುವಾಸಿ ಆದರೆ ಇತ್ತೀಚಿನ ದಿನದಲ್ಲಿ ದಾಂದಲೆ, ಗಲಾಟೆ, ಹೊಡೆದಾಟ ಈ ವಿಚಾರದಲ್ಲಿಯೇ ಸದ್ದು ಮಾಡುತ್ತಿದೆ. ವಿಕೇಂಡ್ ಮಸ್ತಿಗಾಗಿ ಬರುವ ಯುವಕರ ಗುಂಪುಗಳು ಕ್ಷುಲ್ಲಕ ವಿಚಾರಕ್ಕೆ ದಾಂದಲೆ ಮಾಡಿಕೊಳ್ಳುವ ಪ್ರಕರಣಗಳು ಕೆಲದಿನಗಳಿಂದ ಮಣಿಪಾಲದಲ್ಲಿ ಹೆಚ್ಚಾಗುತ್ತಿದೆ.

ಕಳೆದ ಶನಿವಾರವು ಮಣಿಪಾಲ ದಾಂದಲೆ ವಿಚಾರದಲ್ಲಿ ಮತ್ತೆ ಸದ್ದು ಮಾಡಿದೆ. ವಿಕೇಂಡ್ ಮಸ್ತಿಗಾಗಿ ಕುಂದಾಪುರದಿಂದ ಮಣಿಪಾಲಕ್ಕೆ ಬಂದಿದ್ದ ಗುಂಪುಗಳು ನಡುರಸ್ತೆಯಲ್ಲಿ ದಾಂದಲೆ ನಡೆಸಿದ್ದಾರೆ. ಮಣಿಪಾಲದ ಪ್ರತಿಷ್ಠಿತ ಪಬ್ ಆಗಿರುವ DT ( ಡೌನ್ ಟೌನ್ ) ಈ ಘಟನೆ ನಡೆದಿದೆ. ಕೇವಲ ಕ್ಷುಲ್ಲಕ ವಿಚಾರಕ್ಕೆ ಪಬ್ ಒಳಗಡೆ ಗಲಾಟೆ ನಡೆದಿದ್ದು., ಅದರ ಮುಂದವರಿದ ಭಾಗವಾಗಿ‌ ಪಬ್ ಹೊರಗಡೆ ಗುಂಪೊಂದು ಯುವಕನಿಗೆ ಮಾರಣಾಂತಿಕವಾಗಿ ಥಳಿಸಿದೆ. ಬಳಿಕ ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಗುಂಪುಗಳನ್ನು ಚದುರಿಸಿದ್ದಾರೆ. 

ಈ ಘಟನೆಯ ಬಗ್ಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಯವಕನಿಗೆ ಗುಂಪು ಮಾರಣಾಂತಿಕ ಹಲ್ಲೆ  ನಡೆಸಿ ರಕ್ತದ ಮಡುವಿನಲ್ಲಿದ್ದರು, ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸದೆ ವಾಪಸ್ಸು ಕಳಹಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯೆಕ್ತವಾಗಿದೆ.


ಇದೀಗ ಸಮಾಜಿಕ ಜಾಲತಾಣದಲ್ಲಿ ಗಲಾಟೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯ News Hint ಕನ್ನಡಕ್ಕೆ ಲಭ್ಯವಾಗಿದೆ.....